ಸೋಮವಾರ, ಏಪ್ರಿಲ್ 11, 2016

ಭರವಸೆ

ಕಾದ ನೆಲ, ಮೈ, ಮನಸ್ಸು, ಉದುರಿದ ಎಲೆ...
ಎಲ್ಲಾ ಕಾಯುವುದು ಅದೋ ಆ ಮಳೆಗಾಗಿಯೇ
ಮೋಡ ಕಟ್ಟಿಯೂ ಕಟ್ಟೇ ಇಲ್ಲವೇನೋ ಎಂಬಂತೆ ಕಂಡ ಆಗಸ
ಬಂದ ಮೇಲೇ ಬಂತೆನಬೇಕಷ್ಟೆ.. ಆಗೆಲ್ಲೋ ಅರ್ಧ ರಾತ್ರಿಯಲ್ಲಿ ಸ್ವತಂತ್ರ ಸಿಕ್ಕಂತೆ
ಮತ್ತೊಂದು ನಿಟ್ಟುಸಿರು....

ಬೇಗೆ ಬೇಸಿಗೆಯಲ್ಲೇ ಹೆಚ್ಚಾಗಬೇಕೇ.. ಇಷ್ಟು ದಿನ ಹಾಯಾಗೆ ಇತ್ತಲ್ಲ..
ಈಗೇಕೆ ಹೀಗೆ?
ಅಲ್ಲೆಲ್ಲೋ ಜಲ ಪ್ರಳಯವಂತೆ.. ಮತ್ತೆಲ್ಲೋ ಭೂಕಂಪ...
ಅಗ್ನಿಗೆ ಅದೆಷ್ಟೋ ಬಲಿ.. ಮುಗಿದೇ ಹೋಯಿತೇ??
ಇನ್ನು ಏನೇನೋ ಮಾಡಬೇಕೆಂದುಕೊಂಡೆನಲ್ಲ
ನಾಳೆ ಮಾಡಿದರಾಯ್ತು ಅನ್ನುವ ಹಾಗೆ ಇಲ್ಲ...
ಏಕಿಂತ urgency ಬದುಕು??

ನಾಳೆಯ ಕಂಡವರಾರು ಎಂದುಕೊಳ್ಳುವಾಗಲೇ
ಸಣ್ಣದೊಂದು ಮನೆ... ಉಣ್ಣಲಿಕ್ಕೆ ಇಷ್ಟು...
ಒಂದೊಮ್ಮೆ ಬದುಕಿ ಉಳಿದರೆ ಎಂಬ ಭರವಸೆ ಮುಗಿಯುವುದೇ ಇಲ್ಲವಲ್ಲ




ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ