ಶುಕ್ರವಾರ, ಜುಲೈ 30, 2010

ಮದುವೆ ಆದ ಮೇಲೆ ನಾನು (ನಾವು) part 2

ಹಾ.. ಈಗ ಸರಿಯಾಯಿತು ನೋಡಿ.. ಮೊದಲೆಲ್ಲ ನಾನು google ಮಾತ್ರ ಬುದ್ದಿವಂತ ಅನ್ಕೊಂಡಿದ್ದೆ.. ಈಗ ಆ ಮಾತು ಸುಳ್ಳಾಗಿದ್ದು ಖುಷಿ ತಂದಿದೆ.. ಅವರೇ ಮಾಡಿದ chrome browser ಅವರದ್ದೇ blog ಗೆ compatible ಅಲ್ಲ.. ನನ್ನ ಅತ್ಯಂತ ಪ್ರೀತಿಯ ಕನ್ನಡವನ್ನೇ ತೋರಿಸ್ತಾ ಇರ್ಲಿಲ್ಲ... ಇರ್ಲಿ... ಈಗ ನಂಗೆ ಬರಿಯೋಕ್ಕೆ ಸ್ಫೂರ್ತಿ ಬಂದಿದ್ದು ಹೀಗೆ ಇನ್ನೊಂದು blog ಓದಿತ್ತಿದ್ದಾಗ.

ನನ್ನ ಮದುವೆ ಆದ ಮೇಲಿನ ನನ್ನ ಅಪರೂಪದ ಪ್ರಯತ್ನಗಳಲ್ಲಿ ಅತ್ಯಂತ ಪ್ರಮುಖವಾದದ್ದು ನನ್ನ ಅಡುಗೆ!!! ಇಷ್ಟು ಕಷ್ಟ ಆಗತ್ತೆ ಅಂತ ಗೊತ್ತಿದ್ರೆ ಮದುವೇನೆ ಮಾಡ್ಕೊಲ್ತಿರ್ಲಿಲ್ಲ ಅನ್ನೋ ಹಾಗೆ ಆಗಿದೆ ನನ್ನ ಪರಿಸ್ಥಿತಿ, ಬಹುಶ್ಯಃ ನನ್ನ ಪತಿ ರಾಯರದ್ದು ಇದೆ ಪರಿಸ್ಥಿತಿ ಇರಬಹುದು!! ಪಾಪ ನಂಗೆ ಹೆದರಿ ಹೇಳ್ತಾ ಇಲ್ಲ ಅವರು :p

ನನ್ನ ಮರೆಯಾಲಾಗದ ಪಾಕ ಪ್ರಯತ್ನಗಳಲ್ಲಿ ಕೆಲವು ಇಲ್ಲಿದೆ.
  1. ಹಾಲು ಕಾಯಲಿಕ್ಕೆ ಇಟ್ಟು ಚಿತ್ರ ಬರೀತಾ ಕೂತೆ.. ಎಷ್ಟೋ ಹೊತ್ತಾದ ಮೇಲೆ ಏನೋ ಒಂದು ವಿಚಿತ್ರ ವಾಸನೆ ಬರ್ತಾ ಇದ್ಯಲ್ಲ ಅಂತ ಹೊರಗೆಲ್ಲ ಹುಡುಕಿಕೊಂಡು ಬಂದೆ.. ರೂಮಲ್ಲಿ ಏನಾದ್ರೂ ಇಲಿ ಸತ್ತಿದ್ಯ ಅಂತ ಅನ್ಸಿ ಅಲ್ಲೂ ನೋಡಿದ್ದಾಯ್ತು.. ಕೊನೆಗೆ ಅಡುಗೆ ಮನೆ ಕಿಟಕಿ ಇಂದ ವಾಸನೆ ಬರ್ತಾ ಇದ್ದಿಯೇನೋ ಅಂತ ನೋಡಲು ಹೋದಾಗ ಪಾತ್ರೆ ಎಲ್ಲ ಕಪ್ಪಾಗಿ ಹಾಲೆಲ್ಲ ಹಾರಿಹೋಗಿತ್ತು.. ಮನೆ ಎಲ್ಲ ವಾಸನೆ!!
  2. ಮಗಳು ಮೊದಲ ಸರ್ತಿ ಗಂಡನ ಮನೆಗೆ ಹೋಗೋವಾಗ ಹೊಸ ಸಂಸಾರ.. ಅಡುಗೆ ಮನೆಗೆ ಬೇಕಾದ ಎಲ್ಲ ಸಾಮಾನು ತಾಯಿ ಮನೆ ಇಂದಲೇ ತೊಗೊಂಡು ಹೋಗಬೇಕು ಅಂತ ಹಠ ಮಾಡಿ ನನ್ನಮ್ಮ ಎಲ್ಲ ಕೊಟ್ರು.. ಅದರ ಜೊತೆಗೆ ಗಾಂಧೀ ಬಜಾರಿನ ಸುಬ್ಬಮ್ಮನ ಅಂಗಡಿ ಸಾಂಬಾರ್ ಪುಡಿನು ಒಂದು - ನಾನು ಸಾಂಬಾರ್ ಮಾಡಲು ಹೊರಟೆ.. ದಿನಾ ಯಾಕೋ ಸಾಂಬಾರು ಖಾರ ಅಂತ ನನ್ನವರ complaint, ಯಾಕೆ ಅಂತ ಕೇಳಿದಾಗ ಹೇಳಿದೆ - "ರೀ ಸಾಂಬಾರ್ ಯಾಕೋ colorರ್ರೇ ಇಲ್ಲ.. ಅದ್ಕೆ 1 spoon ಹಾಕೋ ಬದ್ಲು 2 ಹಾಕಿದೆ ಅಷ್ಟೇ" ಅಂದೇ.. ಪಾಪ ತಲೆ ತಲೆ ಚಚ್ಕೊಂಡ್ರು ಅವ್ರು :)
  3. ಅಮ್ಮ ರುಚಿ ರುಚಿಯಾಗಿ ಅಡುಗೆ ಮಾಡ್ತಿದ್ರು.. ಈಗ ಅದೆಲ್ಲ miss ಮಾಡ್ಕೊತೀನಿ! ಅದರಲ್ಲೂ ಅನ್ನದ ಜೊತೆ ಮಾವಿನ ಕಾಯಿ ತೊವ್ವೆ ತುಪ್ಪ ಹಾಕ್ಕೊಂಡು ತಿಂದರೆ... ಬಾಯಲ್ಲಿ ಈಗ್ಲೂ ನೀರ್ ಬರತ್ತೆ.. ತುಂಬಾ ದಿನ ಆಯ್ತಲ್ಲ ಅಂತ ಮಾವಿನ ಕಾಯಿ ತೊವ್ವೆ ಮಾಡೋಣ ಅಂತ ಹೊರಟೆ.. ಹೊಸದಾಗಿ ತಂದ TV ನೋಡ್ಕೊಂಡು ಬೇಳೆ ಸೀದ್ ಹೋಗಿದ್ದೆ ತಿಳಿಲಿಲ್ಲ :(
  4. ಬಿಸಿ ಸುದ್ದಿ -- ಮೊನ್ನೆ ಸೋಮವಾರ sweet ತಿನ್ನೋಣ ಅಂತ ಜಾಮೂನ್ ಮಾಡಲು ಹೊರಟೆ.. ಎಣ್ಣೆ ಚೆನ್ನಾಗಿ ಕಾದಿತ್ತು.. ಜಾಮೂನ್ ಉಂಡೆಗಳನ್ನು ಹಾಕಿದ ಕೂಡಲೇ ಎಲ್ಲ ಕಪ್ಪು ಕಪ್ಪು :(
ಇನ್ನೂ ಬೇಕಾದಷ್ಟಿದೆ.. ಟೈಮ್ ಇದ್ದಾಗ ಇದನ್ನ ಅಪ್ಡೇಟ್ ಮಾಡ್ತೀನಿ..

ಮದುವೆಯಾದ 2 ಮುಕ್ಖಾಲು ತಿಂಗಳಲ್ಲೇ ಇಷ್ಟೆಲ್ಲಾ ಆಗಿದೆ... ಇನ್ನೂ ಜೀವನ ಪೂರ್ತಿ?? ಎಷ್ಟು blog ಹೀಗೆ ಬರಿತೀನೋ?? ಆ ದೇವರಿಗೆ ಗೊತ್ತು!!!!!

1 ಕಾಮೆಂಟ್‌: