ಭಾವ ಭೃಂಗ ಹೂದೋಟದ ಬೇಲಿಯ ದಾಟಿ ಬಾ ರೋ ನನ್ನೆದೆ ಬಳಿಗೆ ||೨||
ಹೂವು ಸಾವಿರ ಹಾದಿ ತಪ್ಪಿದರು ಕೇಳುತಿರಲಿ ಮೊರೆ ಕಿವಿಯೊಳಗೆ ||೨||
ಹೂಗಳ ಹೂನಗೆಗೆದೆಗೆಡಬೇಡ ಕಂಪಿನ ಕುಣಿಕೆಗೆ ಸಿಲುಕದಿರು ||೨||
ಯಾರೇ ಕೇಳಲಿ ಎಷ್ಟೇ ಕಾಡಲಿ ||೨||
ನಲ್ಲೆಯ ಹೆಸರನು ಹೇಳದಿರು ||೨|| ||ಭಾವ ಭೃಂಗ||
ಧವಳ ನೀಲಿ ಕನಕಾಂಬರಿ ಕೆಂಪು ಹೂದೋಟದ ಕಿರು ಹಾದಿಯಲಿ ||೨||
ಸೇವಂತಿಗೆ ಮಲ್ಲಿಗೆ ಮಂದಾರ ||೨||
ಸಾವಿರ ಹೆಸರಿವೆ ಯಾದಿಯಲಿ||೨|| ||ಭಾವ ಭೃಂಗ||
ಹೂವು ಹಲವು ದುಂಬಿಯು ಹಲವು ಆದರೆ ಏಕಾಂಗಿ ನನ್ನೊಲವು ||೨||
ಬಂದರೆ ನೀನು ನನ್ನೆಲೆ ಮನೆಗೆ ||೨||
ಚಂದ್ರೋದಯ ಅರೆ ಕ್ಷಣದೊಳಗೆ||೨|| ||ಭಾವ ಭೃಂಗ||
ಕವಿ: ಹೆಚ್ ಎಸ್ ವೆಂಕಟೇಶ್ ಮೂರ್ತಿ
ಕವಿ: ಹೆಚ್ ಎಸ್ ವೆಂಕಟೇಶ್ ಮೂರ್ತಿ