ನಿನ್ನ ಪ್ರೇಮದಲಿ ಪೂರ್ತಿ ಮುಳುಗಿಹ ನನಗೆ ಹಗಲೇನು? ಇರುಳೇನು?
ನಿನ್ನ ನೆನೆಪಲಿ ಕಂಡೆ ನೂರೊಂದು ಕನಸುಗಳ ಕನಸಲೂ ನನಸಲೂ
ಬೇಗ ಬಂದು ಬಿಡು ತಡೆಯಲಾರದಾಗಿಹೆನು ಈ ವಿರಹವನು,
ಇನಿಯನೆದೆಲ್ಲಿ ಮುಖವಿರಿಸುವ ಅನುಭವವ, ಕೊಟ್ಟೆ ನೀನು ಪ್ರೀತಿಯ ಪ್ರತಿಯೊಂದು ಮುತ್ತಿನ ಸುಖದಲ್ಲಿ
ಕಾದು ಕುಳಿತಿಹೆನು ನಮ್ಮಿಬ್ಬರ ಮಿಲನದ ಶುಭ ದಿನಕೆ
ನನ್ನಾಸೆಯೆಲ್ಲವ ನೆರೆವೇರಿಸೆಂದು ಹೊತ್ತಿಹೆನು ಹರಕೆ
ನಿನ್ನ ಮನಸಲೂ ಇದೆ ತುಮುಲ ತುಡಿತಗಳಿದೆಯೆಂದು ಅರಿತಿಹೆನು ನನ್ನ ಮುದ್ದಿನ ನಲ್ಲ
ನಿನ್ನ ತುಂಟಾಟಗಳ ನೆನೆಸಿದರೆ ಬಿಸಿಯೇರುವುದು ನನ್ನ ಮೈ ಕೆನ್ನೆ ಗಲ್ಲ
ತುಟಿಯಲೊಂದು ಕಿರುನಗೆಯು ಬಂದು ನಿಲ್ಲುವುದು ಹಾಗೆ, ನಿನ್ನ ನೆನಪೇ ಒಂದು ಸವಿ ಕನಸಿನಂತೆ
ಹರಿದಾಡುವೆ ನನ್ನ ಮೈ ಮನವನೆಲ್ಲ, ರಾತ್ರಿ ಎಲ್ಲ ನಿದ್ದೆ ಇಲ್ಲ!!
ಕಣ್ಮುಚ್ಚಿದೊಡನೆ ನಿನ್ನದೇ ಬಿಂಬ, ತುಂಬಿರುವೆ ನೀನೆ ಅದರ ತುಂಬಾ
ಬೇಗ ಬಂದು ಬಿಡು ತಡೆಯಲಾರದಾಗಿಹೆನು ಈ ವಿರಹವನು,
ನಿನ್ನ ಪ್ರೇಮದಲಿ ಪೂರ್ತಿ ಮುಳುಗಿಹ ನನಗೆ ಹಗಲೇನು? ಇರುಳೇನು?
ಸೋಮವಾರ, ಸೆಪ್ಟೆಂಬರ್ 20, 2010
ಮನಸ್ಸು-ಸಂಬಂಧ-ಕಾಲ ಹೀಗೆ ಏನೇನೋ..
ಸಂಬಂಧದ ಕೊಂಡಿಗಳು ಹರಿದಾಗ ಆಗುವ ನೋವಿಗಿಂತಲೂ, ಅದನ್ನು ನೆನೆಸಿ ಆಗುವ ನೋವೆ ಹೆಚ್ಚು ಯಾತನೆ ಕೊಡುತ್ತದೆ
ಮತ್ತೆ ಬೆಸೆಯುವ ಗೀಳಿಗೇಕೆ ನಾವು ಬೀಳುವುದಿಲ್ಲ?? ಮತ್ತೆ ಹರಿದರೆ ಎಂಬ ಆತಂಕವೇ ಮನದಲ್ಲಿ ಮನೆ ಮಾಡುತ್ತದೆ
ಸಮಯದ ಹಾದಿಯಲ್ಲಿ ಮಾಸಿಹೋದ ಎಷ್ಟೋ ಹೆಜ್ಜೆಗಳು ತನ್ನ ಅಸ್ತಿತ್ವವನ್ನು ಮತ್ತೆ ಹುಡುಕ ಹೊರಟಿದೆ
ನೆನಪಿನಂಗಳದಲ್ಲಿ ಅರಳಿದ ಹೂಗಳನ್ನು ಮಾತ್ರ ಕಣ್ಣಲ್ಲಿ ಮೂಡಿಸಿ, ಚುಚ್ಚಿದ ಮುಳ್ಳುಗಳ ನೋವನ್ನು ಇದೇನು ಮಹಾ ಎಂದು ಮರೆಸಿದೆ.
ಈ ಕ್ಷಣದ ಕೋಪವ ಹಾಗೆ ಬಿಡುವ.. ಕಾಲವೇ ಅದಕ್ಕೆ ಉತ್ತರಿಸಿ ನಮ್ಮ ನೋವನ್ನ ಮರೆಸೀತು
ಸಂಬಂಧಗಳ ಬೆಸೆಯಿಸಿ... ಕಲಾಯ ತಸ್ಮೈ ನಮಃ ಎಂದು ಮತ್ತೆ ಕಾಲವು ತನ್ನ ಹಿರೆಮೆಯನ್ನು ತೋರಿಸೀತು...

ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)