ಗುರುವಾರ, ಏಪ್ರಿಲ್ 14, 2011

ಭಾವಗೀತೆ ೮ - ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ

ಮತ್ತದೇ ಬೇಸರ ಅದೇ ಸಂಜೆ ಅದೇ ಏಕಾಂತ
ನಿನ್ನ ಜೊತೆಯಿಲ್ಲದೆ ಮಾತಿಲ್ಲದೆ ಮನ ವಿಭ್ರಾಂತ || ಮತ್ತದೇ ||

ಕಣ್ಣನೇ ತಣಿಸುವ ಪಡುವಣ ಬಾನ್ ಬಣ್ಣಗಳು
ಮಣ್ಣನೇ ಹೊನ್ನಿನ ಕಣ್ಣಾಗಿಸುವೀ ಕಿರಣಗಳು
ಮತ್ತದೇ ಹಸುರಿಗೆ ಹಸೆಯಿಡುತಿರುವೀ ಪದಗಾನ
ಚಿನ್ನ ನೀನಿಲ್ಲದೆ ದಿಂ ಎನ್ನುತಿದೆ ರಮ್ಯೋದ್ಯಾನ || ಮತ್ತದೇ ||

ಆಸೆಗಳ ಹಿಂಡಿನ ತುಳಿತಕ್ಕೆ ಹೊಲ ನನ್ನೀ ದೇಹ
ಬರುವೆಯೋ ಬಾರೆಯೋ ನೀನೆನ್ನುತಿದೆ ಸಂದೇಹ
ಮುತ್ತಿಗಾಲಸ್ಯವ ಬಿಗಿ ಮೌನವ ಹೊದೆದೂಡಿಸು ಬಾ
ಮತ್ತೆ ಸಮತೆಯ ಹಿರಿಬೇಲಿಯ ಸರಿ ನಿಲಿಸು ಬಾ || ಮತ್ತದೇ ||

1 ಕಾಮೆಂಟ್‌:

  1. ಉಷಾ ಮೇಡಂ ಅವರು ಯಾವ ಏಕಾಂತದ ಸಂಜೆ ಇದನ್ನು ನೆನೆಸಿಕೊಂಡರೋ...
    ಗೊತ್ತಿಲ್ಲಾ.... ಆದರೆ..ಒಂದು ಕಾಲದಲ್ಲಿ ನನ್ನ ಬಾಯಲ್ಲಿ ತುಂಬಾ ಗುನುಗಿದ ಹಾಡಿದು....

    ಪ್ರತ್ಯುತ್ತರಅಳಿಸಿ