ನೆನೆಸುವುದೆಲ್ಲ ಸಿಹಿಯದೆ ಆಗಿರಲಿ
ಕಹಿಯ ಪುಟವನ್ನೇ ನೋಡಿ ಕಣ್ಣೀರನೇಕೆ ಕರಗಿಸುವೆ?
ಒಳ್ಳೆಯದೇ ಬಗೆ ಕೆಟ್ಟವರಿಗೂ ಎಂಬ ವೇದಾಂತ ಬೇಡ
ಕ್ಷಣಿಕ ಸುಖದ ಸಂತೋಷವೂ ಬೇಡ
ಹಳೆಯದೆಲ್ಲವ ಮರೆತು ಸಿಗುವ ನೆಮ್ಮದಿಯ ಬದುಕು ಸಾಲದೇ ಗೆಳೆಯ??-------------------------------------
ಬದುಕುವ ದಿನವೆಲ್ಲ ಗಂಟು ಮಾಡುವ ಚಿಂತೆ
ಕಂಡೋರ ಕಣ್ಣು ಬೀಳುವ ಸಮಯಕೆ ಮುಚ್ಚಿಡುವ ಚಿಂತೆ
ಕೊನೆಗೊಂದು ದಿನ ಚಿತೆಯ ಮೇಲೆರಿಸಿದಾಗ
ಜವರಾಯ ಕರೆದೊಯ್ಯುವಾಗ ಹೊನ್ನ ಕೊಂಡೊಯ್ಯುವರೆ?
ಅಷ್ಟಿಲ್ಲದೆ ಹೇಳಿದರೆ ಹಿರಿಯರು "ಜಿಪುಣ ಮಾಡಿಟ್ಟಿದ್ದು ಪರರಿಗೆಂದು"?