ಮಂಗಳವಾರ, ಸೆಪ್ಟೆಂಬರ್ 13, 2011

ಅವರಿವರ ನೋಡಿ ಅನಿಸಿದ್ದು ಹೀಗೆ ...

ನೆನೆಸುವುದೆಲ್ಲ ಸಿಹಿಯದೆ ಆಗಿರಲಿ
ಕಹಿಯ ಪುಟವನ್ನೇ ನೋಡಿ ಕಣ್ಣೀರನೇಕೆ ಕರಗಿಸುವೆ?
ಒಳ್ಳೆಯದೇ ಬಗೆ ಕೆಟ್ಟವರಿಗೂ ಎಂಬ ವೇದಾಂತ ಬೇಡ
ಕ್ಷಣಿಕ ಸುಖದ ಸಂತೋಷವೂ ಬೇಡ
ಹಳೆಯದೆಲ್ಲವ ಮರೆತು ಸಿಗುವ ನೆಮ್ಮದಿಯ ಬದುಕು ಸಾಲದೇ ಗೆಳೆಯ??

-------------------------------------

ಬದುಕುವ ದಿನವೆಲ್ಲ ಗಂಟು ಮಾಡುವ ಚಿಂತೆ
ಕಂಡೋರ ಕಣ್ಣು ಬೀಳುವ ಸಮಯಕೆ ಮುಚ್ಚಿಡುವ ಚಿಂತೆ
ಕೊನೆಗೊಂದು ದಿನ ಚಿತೆಯ ಮೇಲೆರಿಸಿದಾಗ
ಜವರಾಯ ಕರೆದೊಯ್ಯುವಾಗ ಹೊನ್ನ ಕೊಂಡೊಯ್ಯುವರೆ?
ಅಷ್ಟಿಲ್ಲದೆ ಹೇಳಿದರೆ ಹಿರಿಯರು "ಜಿಪುಣ ಮಾಡಿಟ್ಟಿದ್ದು ಪರರಿಗೆಂದು"?

3 ಕಾಮೆಂಟ್‌ಗಳು:

  1. 'avarivaru' yaaro aagiddare
    ninage yaake eno 'anisbeku'?
    'avarivaru' yaaro aagiddare
    ninage yaake eno 'anisbeku'?

    avaru nimma yajamaanru aagidre taane hige anisirbeku? ;)

    ಪ್ರತ್ಯುತ್ತರಅಳಿಸಿ
  2. ಅನಾಮಧೇಯ ಅವರೇ.. ಅನ್ನಿಸುವುದು ಏನು ಅನ್ನುವುದರ ಮೇಲೆ ಯಾರಿಗೆ ಅನ್ನುವುದು ನಿಮ್ಮ ಮೇಲಿನ ತರ್ಕವಾದರೆ ಅದು ನಮ್ಮ ಯೆಜಮನರಿಗಂತೂ ಅಲ್ಲ.... ಮೇಲಾಗಿ ನನ್ನವರು ಜಿಪುಣನೂ ಅಲ್ಲ :)

    ಪ್ರತ್ಯುತ್ತರಅಳಿಸಿ