ಬುಧವಾರ, ಆಗಸ್ಟ್ 5, 2009

ಸ್ನೇಹವೆಂಬ ಬಳ್ಳಿ

ಮೊನ್ನೆ ಸ್ನೇಹಿತರ ದಿನಾಚರಣೆ ಆದಾಗಿನಿಂದ ಏನೇನೋ ಯೋಚನೆಗಳು ಬಂದು ಕಾಡುತ್ತಾ ಇದೆ.

ಯಾಕೆ ನಮ್ಮ ಹಳೆ ಸ್ನೇಹಿತರು ನಮ್ಮನ್ನ ಮರೀತಾರೆ?? ನಾವೇ ಅವ್ರನ್ನ ಮರ್ತಿದ್ದೀವಾ?? ಒಟ್ನಲ್ಲಿ ನಮ್ಮ busy ಮತ್ತು practicle life ನಮ್ಮ ಸ್ನೇಹಿತ ಸ್ನೇಹಿತೆರನ್ನ ನಮ್ಮಿಂದ ದೂರವಾಗಿಸಿದೆ. ಹೀಗೆಲ್ಲ ಏನೇನೋ ಸಾಂಧರ್ಭಿಕ ಯೋಚನೆಗಳು ಬಂದಾಗ ನನ್ನ ಈಗಿನ ಗೆಳೆಯ ಗೆಳತಿಯರ ಬಗ್ಗೆ ನಂಗೆ ತುಂಬ ಹೆಮ್ಮೆ ಇದೆ, ಎಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಅವರದ್ದೇ ಆದ ವಿಶಿಷ್ಟ ಗುಣಗಳನ್ನ ಹೊಂದಿ ನನ್ನ ಜೀವನದಲ್ಲಿ ಅವರ ಗುಣದ ಕಂಪನ್ನು ಬೀರ್ತಾ ನನ್ನ ಮೇಲೆ ಪ್ರಭಾವ ಬೀರ್ತಾ ಇದ್ದಾರೆ.

ಒಬ್ಬರು ಬುದ್ದಿವಂತರಾದರೆ, ಇನ್ನೊಬ್ರು ಹಾಡ್ತಾರೆ, ಮತ್ತೊಬ್ರು english expert, ಮತ್ತೊಬ್ರಿಗೆ ಕನ್ನಡ ಭಾಷಾಭಿಮಾನ, ಮಗೊದೊಬ್ರು ಅಡುಗೆ ಪ್ರವೀಣರು, ಚೆನ್ನಾಗಿ ಮಾತಾಡೋರು, moral support ಕೊಡೋರು, ಹೀಗೆ ಹಲವಾರು ಗೆಳೆತನದ ಕೊಂಡಿಗಳು ನನ್ನ ಆಕರ್ಶಿಸಿದೆ. ಇದ್ರಲ್ಲಿ ನಾವು ಕೊಟ್ಟು ತೊಗೋಳೋದು ಬರೀ ಸ್ನಹ ಮಾತ್ರ ಅಂತ ಅನ್ಕೊಂಡಾಗ ನಾನೇ ಪುಣ್ಯವಂತೆ ಅಂತಲೂ ಅನ್ನಿಸುತ್ತೆ. ಪ್ರತಿ ವರ್ಷವೂ ಅದೇ ಋತುಗಳು ಮರುಕಳಿಸಿದರೂ, ಅವುಗಳು ಕೊಡುವ ಅನುಭವ ಪ್ರತಿ ಬಾರಿಯೂ ಬೇರೇನೆ ಅಲ್ವಾ?? ನನ್ನ ಬಿಟ್ಟು ಹೋದ, ನನ್ನೊಟ್ಟಿಗೆ ಇರುವ ಎಲ್ಲ ಗೆಳೆಯ ಗೆಳತಿಯರಿಗೆ ನನ್ನ ಧನ್ಯವಾದಗಳು, ನನ್ನ ತಮ್ಮ ಗೆಳೆತಿಯಾಗಿ ಮಾಡಿಕೊಂಡಿದ್ದಕ್ಕೆ.

ಅವರಿಗಾಗಿ ಈ ಸಾಲುಗಳನ್ನು ಬರ್ದಿದ್ದೀನಿ, ಓದಿ ಹೇಗಿದೆ ಅಂತ ಹೇಳ್ತೀರಾ??

ಬಾಳೆಂಬ ಸಸಿ, ಚಿಗುರೊಡೆದು,
ಸ್ನೇಹವೆಂಬ ಬಳ್ಳಿಯು ಎಲ್ಲೆಲ್ಲೂ ಹರಡಿ,
ಹೊಸ ಹೂಗಳ ನೀಡಿದೆ.

ಉದುರಿದ ತರು ಲತೆಗಳಿಂದ ಮನಕೆ ನೋವು.
ದಿನವೂ ಮೊಳಕೆಯೊಡೆಯುವ ಹೊಸ ಚಿಗುರು.
ಮರವೆಲ್ಲ ಕಂಪು, ಕಣ್ಣಿಗೆ ತಂಪು.

ಗ್ರೀಷ್ಮದ ಗಾಳಿ ತೀಡಿ, ಕಿಡಿ ಧೂಳನು ಹರಡಿದರೂ,
ವರ್ಷವು ಮನದೆಲ್ಲ ಕೊಳಕುಗಳ ತೊಳೆದು ಹಸಿರಾಗಿಸಿದೆ,
ಕಾಯುತಿದೆ ಮತ್ತೆ ವಸಂತಕೆ, ಎದುರು ನೋಡುತಿದೆ ನವ ಸಂತಸಕೆ.

2 ಕಾಮೆಂಟ್‌ಗಳು:

 1. ಕಣ್ ರೆಪ್ಪೆ ತೆರೆದರೆ ಜನನ,
  ಶಾಶ್ವತ ರೆಪ್ಪೆ ಮುಚ್ಚಿದರೆ ಮರಣ,
  ಈ ಜನನ ಮರಣಗಳ ನಡುವೆ,
  ರೆಪ್ಪೆ ಆಡಿಸುವುದೇ ಜೀವನ,
  ಆ ರೆಪ್ಪೆಯಾಡುವಾಗ ಸಿಗುವ ಆನಂದವೇ ಗೆಳೆತನ,
  ಆ ಗೆಳೆತನಕ್ಕೆ ನನ್ನ ಕೋಟಿ ನಮನ..."

  ಪ್ರತ್ಯುತ್ತರಅಳಿಸಿ