ಮರೆತೆ ನೀ ನಮ್ಮ ಗೆಳೆತನ,
ಗೆಳೆಯನೆ ನೀನು ಬರೀ ಗೆಳೆಯನಾಗಿರಲಿಲ್ಲ,
ಬಂಧು, ಬಳಗ, ಗುರು, ಹಿತೈಷಿ, ತಂದೆ ತಾಯಿಯರ ಎಲ್ಲ ಪಾತ್ರ ವಹಿಸಿದ್ದೆ
ನನ್ನೆಲ್ಲ ತುಂಟಾಟ, ಆಟ, ಪಾಠಗಳ ಸಹಿಸಿದ್ದೆ.
ಅನುದಿನವು ನಿನ್ನ ನೆನಪೇ ಕಾಡುತಲಿಹುದು ಹಗಲಿರುಳು
ಯಾರ ನಂಜು ಬಿತ್ತೋ ನಮ್ಮ ಸ್ನೇಹಕ್ಕೆ ಎಂದು ಚಿಂತಿಸಿ ಬೇಸತ್ತೆ
ನಮ್ಮ ಸ್ನೇಹದ ಬುತ್ತಿಯಲ್ಲಿ ಇಷ್ಟೇ ಉಣಬೇಕೆಂದು ಬರೆದಿತ್ತೋ ಏನೋ
ಅದಕೇ ಮರೆತೆ ನೀ ನಮ್ಮ ಗೆಳೆತನ.
ಸ್ನೇಹ ದಿನಾಚರಣೆಯಂದು ನಮ್ಮ ಸ್ನೇಹವ ಮರೆತ ನನ್ನ ಗೆಳೆಯನಿಗೆ ಇದು ತಲುಪಲಿ!!
ಇಂತಿ,
ನಿನ್ನ ಗೆಳತಿ
ಉಷಾ
ಕಣ್ ರೆಪ್ಪೆ ತೆರೆದರೆ ಜನನ,
ಪ್ರತ್ಯುತ್ತರಅಳಿಸಿಶಾಶ್ವತ ರೆಪ್ಪೆ ಮುಚ್ಚಿದರೆ ಮರಣ,
ಈ ಜನನ ಮರಣಗಳ ನಡುವೆ,
ರೆಪ್ಪೆ ಆಡಿಸುವುದೇ ಜೀವನ,
ಆ ರೆಪ್ಪೆಯಾಡುವಾಗ ಸಿಗುವ ಆನಂದವೇ ಗೆಳೆತನ,
ಆ ಗೆಳೆತನಕ್ಕೆ ನನ್ನ ಕೋಟಿ ನಮನ..."
ಓ ನನ್ನ ಗೆಳತಿ ,
ಪ್ರತ್ಯುತ್ತರಅಳಿಸಿನೀನು ನಾನು ಒಟ್ಟಿಗೆ ಕಳೆದದ್ದು ಎಷ್ಟು ದಿನ ?
ಅದು ಬರೀ ಎರಡು ಕ್ಷಣ, ಆದರೆ ಅದರ ನೆನೆದು ನೆನೆದು ಕಳೆವೆ ನನ್ನ ಜೀವನ !!