ಕವಿ: ಸಾ ಶಿ ಮರುಳಯ್ಯ
ವೇಷ ಬೇರೆ ಭಾಷೆ ಬೇರೆ ದೇಶ ಒಂದೇ ಭಾರತ
ಒಂದೇ ತಾಯ ಮಕ್ಕಳೆಂದು ಘೋಶಿಸೋಣ ಸಂತತ
ತೀರ್ಥ ನಗೆಯ ಕ್ಷೇತ್ರವಿದೋ ಭವ್ಯ ನಾಡು ಭಾರತ
ಋಷಿಗಳುಸಿರ ಹರಕೆ ಹೊತ್ತ ದಿವ್ಯ ನಾಡು ಭಾರತ
ಕಡಲುಗಳನೆ ಉಡುಗೆಯುಟ್ಟು ಘಟ್ಟದೊಳು ಬಳೆಯ ತೊಟ್ಟು
ನದಿ ನದಗಳ ಹಾರವಿಟ್ಟು ಸೇತುವಿಂದ ಸಿಂಧುವರೆಗೂ ಬೆಳೆದು ನಿಂತ ಭಾರತ
ಭಂಗಗೊಳದ ವಂಗ ನಾಡ ಕೂಡಿ ಮೆರೆದ ಭಾರತ,
ಇದೇ ನಮ್ಮ ಭಾರತ, ಪುಣ್ಯ ಭೂಮಿ ಭಾರತ ||ವೇಷ ಬೇರೆ||
ಭರತ ಖಂಡದಿಂದಲೇನೆ ನಿನಗೆ ಮೋಕ್ಷ ಪ್ರಾಪ್ತಿ
ತಪ್ಪಿ ನುಡಿದೆ ಎಂದರಹುದು ನಿನಗೆ ತಕ್ಕ ಶಾಸ್ತಿ
ಯಾವ ದೇಶದಲ್ಲೇ ದುಡಿ ಯಾವ ಮಣ್ಣಿನಲ್ಲೇ ಮಡಿ
ನಿಂತ ನೆಲವು ಹಿಡಿದ ಹುಡಿ ಭರತ ಭೂಮಿ ಎಂದು ತಿಳಿ ||ವೇಷ ಬೇರೆ||
ಮಣ್ಣ ಮೋಹ ಬಿಟ್ಟರಿಲ್ಲೋ ನಿನಗೆ ಬೇರೆ ಸದ್ಗತಿ
ಬರಿಯ ಮಾತಿನಲ್ಲೇ ಮುಗಿವುದಲ್ಲೋ ನಿನ್ನ ಸಂಸ್ಕೃತಿ
ಮಾನವತೆಯ ಶುಚಿ ಮತಿ ಸನಾತನದ ಸತ್ಕ್ರುತಿ ||ವೇಷ ಬೇರೆ||
PS: ಇದೂ ಕೂಡ ನಮ್ ಸ್ಕೂಲಲ್ಲಿ ಹೇಳ್ತಾ ಇದ್ದ ಹಾಡು, ಆದ್ರೆ ಇದರ ರಾಗ ಮರೆತು ಹೋಗಿದೆ, ಯಾರಾದ್ರೂ ನೆನಪು ಮಾಡಿ ಕೊಟ್ರೆ ಅವರಿಗೆ ದೊಡ್ಡದೊಂದು ಚಾಕಲೇಟ್ ಕೊಡಿಸ್ತೀನಿ :)
ನಿಮ್ಮ ಬ್ಲಾಗ್ ಚೆನ್ನಾಗಿದೆ. ನಿರಂತರವಾಗಿ ಬರೆಯಿರಿ.
ಪ್ರತ್ಯುತ್ತರಅಳಿಸಿಶಶಿಧರರೆ, ಧನ್ಯವಾದಗಳು... ಖಂಡಿತ ಪ್ರಯತ್ನಿಸುತ್ತೇನೆ...
ಪ್ರತ್ಯುತ್ತರಅಳಿಸಿಧನ್ಯವಾದ
ಪ್ರತ್ಯುತ್ತರಅಳಿಸಿ