ಬುಧವಾರ, ಏಪ್ರಿಲ್ 23, 2014

ಪುನರಾಗಮನ...

ಎಲ್ಲೋ ಕಳೆದು ಹೋಗಿದ್ದೇನೆ ಎಂದುಕೊಳ್ಳುತ್ತಿರುವಾಗಲೇ ಮತ್ತೊಂದು ಯೋಚನೆ... 
ಮೋಹಗಳ ಬಿಟ್ಟು ಬಿಡಬೇಕು ಎನ್ನುತ್ತಿರುವಾಗಲೇ ನಾಳೆಯ ಭಯ 
ಮಾತಿಲ್ಲದೆ ಇರಿದಿರಿದು ಕೊಲ್ಲುವ ನೋಟ... 
ಎಲ್ಲವು ವ್ಯರ್ಥ ಪ್ರಯತ್ನಗಳೇ ಎಂದೆನಿಸುವಷ್ಟು ನೀರವ ಮೌನ .. ನಿಟ್ಟುಸಿರು.. !!

ಮತ್ತದೇ ಬೇಸರ ಅದೇ ಸಂಜೆ ಎಂದು ಮತ್ತೆ ಮತ್ತೆ ಕೇಳಿಸುವ ರಾಗ... 
ಇಷ್ಟೇ... ಮತ್ತೇನೋ ಇಲ್ಲ .... ಎಂದುಕೊಳ್ಳುತ್ತಿರುವಾಗಲೇ 
ಹೊಸ ದಿನ... ಹೊಸ ಚಿಗುರು... ಹೊಸದೊಂದು ಬಯಕೆ... 
ಮತ್ತೊಮ್ಮೆ ಹೇಳಬೇಕಿದೆ.. 
ನಾನಿಲ್ಲೇ ಇದ್ದೆನೆ... ಇನ್ನು ಮುಗಿದಿಲ್ಲ... 
ಇದು ರವಿಯ ಹೊನಲು ಹರಿಯುವ ಮುನ್ನದ ಕತ್ತಲಷ್ಟೇ... 

2 ಕಾಮೆಂಟ್‌ಗಳು: