ಇತ್ತೀಚೆಗಿನ ಭಾವನಾ ಲಹರಿಯೇ ಬೇರೆ ...
ಎಲ್ಲರು ಇದ್ದಲ್ಲಿ ನಾನಿದ್ದರೂ ಇಲ್ಲದಂತೆ... ನಿನ್ನದೇ ಧ್ಯಾನ...
ಹೇಗಿರಬಹುದು.. ಏನು ತಿನ್ನ ಬಹುದು... ಹೇಗೆ... ಯಾವಾಗ....
ನಿನ್ನ ಬರುವಿಗಾಗಿಯೇ ಕಾದು ಕೂತಂತಿದೆ...
ಬಂದ ಕೂಡಲೇ ನನ್ನ ಗುರುತು ಹಿಡಿಯುವೆಯಲ್ಲ?? ನಿನ್ನ ಅಪ್ಪನಿಗಿಂತ ಮೊದಲು??
ನನ್ನೆಲ್ಲ ಭಾವಗಳ ನಿನ್ನಲ್ಲಿ ನೋಡಿ ನನ್ನದೇ ಅಂಶ ನೀನೆಂದು ಬೀಗುವ ಬಯಕೆ...
ನಿನ್ನಿಂದಲೇ ನಾನು ಸಂಪೂರ್ಣಳು ಎಂದೀಗ ಅರಿತೆ... ನಿನ್ನ ಇರುವಿಕೆಯ ಭಾವನೆಯ ಬಿಟ್ಟುಕೊಡಲಾರೆ
ಜಗದಲ್ಲೆಲ್ಲ ನನ್ನೊಬ್ಬಳೆ ಅಲ್ಲ.... ಗೊತ್ತು ನನಗೆ... ಆದರೂ.....
ನಿನ್ನ ಬರುವಿಗಾಗಿಯೇ ಕಾದು ಕೂತಂತಿದೆ...
ಹೀಗೆ ಏನೇನೋ ಬರೆಯುತ್ತಲೇ ಇದ್ದೆ... ನೀನಗಾಗಲೇ ಬರುವ ಆತುರ...
ಅಮ್ಮನ ನೋಡದೆ ಇನ್ನು ಇರಲಾರೆ ಎಂಬಂತೆ ದಿನ ತುಂಬುವ ಮೊದಲೇ ಬಂದೆ...
ನೀನು ಬಂದದ್ದೆ.. ಇದೇನಾ ನಾನು ಇಷ್ಟು ದಿನ ನೋಡಲು ತವಕಿಸಿದ್ದು? ಇದೇ ಮೊದಲು ಅನ್ನಿಸಿದ್ದು...
ಪುಟ್ಟ ಕೈ... ಪುಟ್ಟ ಪಾದ ... ಪುಟ್ಟ ಬಾಯಿ... ಯಾರದ್ದು ನೋಡಿದ ನೆನಪೇ ಇಲ್ಲ...
ಅಪ್ಪನ ಕಡೆಯವರು ಬಂದಾಗ ಎಲ್ಲ ಅಪ್ಪನಂತೆ ಅಂದಾಗ.. ತುಸು ಖುಶಿ.. ತುಸು ಬೆಜಾರು... ಎರಡು ಆದದ್ದಿದೆ...
ಕಷ್ಟ ಪಟ್ಟು ತಿನ್ನಿಸಿ... ಮಲಗಿಸಿ... ಏನೋ ಮಾಡಬೇಕು ಎಂದು ಹೊರಟಾಗ ...
ನಿನ್ನ ಕೋಳಿ ನಿದ್ದೆಯನ್ನು ಬ್ಯೆದುಕೊಂಡದ್ದೂ ಇದೆ...
ನಿದ್ರೆ ಕೆಡಿಸಿ ಅತ್ತಿದ್ದು ಕಡಿಮೆ ಆದರೂ... ಈ ಕ್ಷಣ ನಿನ್ನ ಬಿಟ್ಟರೆ ನನಗೆ ಯಾರೂ ಇಲ್ಲ ಎಂದು ಎಲ್ಲವನ್ನು ಮರೆಸುವ ನಿನ್ನ ನಗು ನೊಡಿದಾಗ... ನಿಜವಾಗಿಯೂ ಎಲ್ಲವನ್ನು ಮರೆತಿದ್ದೇನೆ...
ನಿನಗಾಗಲೇ ೮ ತಿಂಗಳು...??
ಎಲ್ಲೇ ಇದ್ದರು ನಿನ್ನದೇ ಚಿಂತೆ... ನಿನ್ನ ನಗು... ಅಳು.... ನಿನ್ನ ತುಂಟತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಾ ಇದೆ...
ನಿನ್ನ ಬಬ್ಬಮ್.. ಅದಾ.... ಹಂಗ... ಟಾಟಾ... ಇನ್ನು ಏನೇನೋ ಹೊಸ ಹೊಸ ಪದಗಳಿಗೆ ನಾವೇ ಅರ್ಥಗಳನ್ನು ಹುಡುಕಿ .. ನಿನ್ನ ಬೇಕು ಬೇಡಗಳನ್ನು ತಿಳಿಯುವ ಪ್ರಯತ್ನ ದಿನಾ ನಡಿಯುತ್ತಲೇ ಇದೆ...
ನಿನ್ನ ಮುಟ್ಟಿದಾಗ ಆಗುವ ಹಿತನುಭವ...
ನಿನ್ನ ಗಲಾಟೆ... ನನ್ನ ಕೋಪ....
ಎಲ್ಲವು ನನಗೆ ಇಷ್ಟ... ಈ ಮನೆಯ ಬೆಳಕಾಗಿ ಬಂದೆ... ಬರೀ pk.. ಉಷಾ.. ಆಗಿದ್ದವರನ್ನು... ಅಪ್ಪ ಅಮ್ಮ ಮಾಡಿದೆ..
ಹೌದು, ಇದೆಲ್ಲ ನನಗನ್ನಿಸಿದ ಭಾವನೆಗಳೇ ... ತಾಯ್ತನದ ಮೆಟ್ಟಿಲನ್ನು ಏರುವಾಗಿನದ್ದು... ಪ್ರಕಟಿಸಲು ಇಷ್ಟು ದಿನ ಬೇಕಾಯ್ತು..

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ