ಶುಕ್ರವಾರ, ಜುಲೈ 31, 2009

ಮನಸ್ಸಿಗೆ ಬಂದದ್ದು...

 1. ಮಾತಿನ ಚಾಟಿಯ ಬೀಸಿ,
  ಬರಿಯ
  ನೋಟದಲೆ ಎದೆ ಬಿರಿದು,
  ಸುಡುತಲಿಹುದು ಒಡಲ ಕಡಲು,
  ಮನೆ ಒಡಕಲು, ಮನ ಬಡಕಲು,
  ಎಲ್ಲೆಲ್ಲೂ ಇಣುಕಲು, ಕಂಡಿರುವುದೊಂದು ಸಣ್ಣ ಗಿಳಬಾಗಿಲು (ಕಿಟಕಿ),
  ಬರುವುದೇ ನಮ್ಮ ಬಾಳಲೂ ಉಜ್ಜ್ವಲ ಹಗಲು??

 2. ನಿನ್ನೀ ಒಡನಾಟ, ಸುಂದರ ನೋಟ,
  ನನ್ನ ಕಾಣ ಬಯಸುವ ತಿಣುಕಾಟ,
  ಅಗಾಗ ಮಾಡುವ ತುಂಟಾಟ,
  ಒಮ್ಮೊಮ್ಮೆ ಆಗುವುದು ಒಳ ಜಗಳದ ತಿಕ್ಕಾಟ,
  ಒಟ್ಟೊಟ್ಟಿಗೆ ಆಗುವುದು ಆಟ.. ಪಾಠ,
  ಈಗೀಗ ಕೇಳಿಸುತಿದೆ ಮನಸ್ಸಿನ ಸಣ್ಣದೊಂದು ಗುನುಗಾಟ,
  ಹೇಳುತಿದೆ ಪಿಸುಮಾತಲಿ ಎಂದೆಂದಿಗೂ ಒಂದಾಗಿರಲಿ ನಮ್ಮ ದಾರಿಯ ಓಟ

1 ಕಾಮೆಂಟ್‌:

 1. ಹುಡುಕಾಟವೇ ಜೀವನ ಹೊಡೆದಾಟದ ಮಧ್ಯ ಗೆದ್ದವನ ಜೀವನ ಪಾವನ, ಏನು ಬೇಕು ಎಂದು ಗೊತ್ತಿಲ್ಲದೆ ಇರುವುದ ಬಿಟ್ಟು ಇಲ್ಲದಿರುವುದನು ಎಲ್ಲೆಲ್ಲಿಯೂ ಹುಡುಕುವುದೇ ಜೀವನ !!ಅಲ್ಲವೇ ??

  ಪ್ರತ್ಯುತ್ತರಅಳಿಸಿ